ಗೌರವಾನ್ವಿತ ಸದಸ್ಯರುಗಳೇ,

ಕ್ಲಬ್ಬಿನ ಗೌ.ಕಾರ್ಯದರ್ಶಿಯ ಹುದ್ದೆಗೆ ನನ್ನನ್ನು ಆರಿಸಿರುವ ತಮ್ಮೆಲ್ಲರಿಗೂ ಪ್ರಥಮವಾಗಿ ವಂದಿಸುತ್ತೇನೆ. ಗೌ.ಕಾರ್ಯದರ್ಶಿಯ ಹುದ್ದೆ ಅತ್ಯಂತ ಗುರುತರವಾದ ಕಾರ್ಯವ್ಯಾಪ್ತಿಯನ್ನು ಹೊಂದಿರುವಂತಹದ್ದು, ಗೆದ್ದ ಹುಮ್ಮಸ್ಸಿನಲ್ಲಿ ಎಲ್ಲ ಪದಾಧಿಕಾರಿಗಳ, ಆಡಳಿತಮಂಡಳಿಯ ಸದಸ್ಯರುಗಳ ವಿಶ್ವಾಸದೊಂದಿಗೆ ಕ್ಲಬ್ ನ್ನು ಪ್ರಗತಿಯೆಡೆಗೆ ಕೊಂಡೊಯ್ಯುವತ್ತ ಒಂದೊಂದೆ ಹೆಜ್ಜೆಯನ್ನು ಇಡುತ್ತಾ ಮುಂದೆ ಸಾಗುತ್ತಿದ್ದೇವೆ, ಪ್ರಮುಖವಾಗಿ ಕ್ಲಬ್ಬಿನ ಆರ್ಥಿಕ ಸ್ಥಿತಿ ಉತ್ತಮ ಪಡಿಸುವಿಕೆ, ಸೋರಿಕೆಗಳನ್ನು ತಡೆಗಟ್ಟುವಿಕೆ ಹಾಗೂ ತುರ್ತು ಕಾಮಗಾರಿಗಳತ್ತ ಗಮನಹರಿಸಿ ಅವುಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ.

ನಂದಿನಿ ಲೇಔಟ್‌ ಕ್ಲಬ್‌ ಒಂದು ಸದಸ್ಯರ ಕ್ಲಬ್‌, ಇದು ತನ್ನದೇ ಆದ ವೈಶಿಷ್ಠತೆಯನ್ನು ಹೊಂದಿದೆ ಹಾಗೂ ಉತ್ತಮ ಸದಸ್ಯ ವೃಂದವನ್ನು ಹೊಂದಿದೆ, ಚಿಕ್ಕದಾದರೂ ಚೊಕ್ಕವಾದ ವಾತಾವರಣ ಹೊಂದಿರುವ ನಮ್ಮ ಕ್ಲಬ್‌ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್ಬಿನಲ್ಲೊಂದಾಗಿದ್ದು, ಉತ್ತಮ ಗುಣಮಟ್ಟದ ಆಹಾರ, ಸೇವೆಗಳನ್ನು ಸದಸ್ಯರುಗಳಿಗೆ ಹಾಗೂ ಸಂಯೋಜಿತ ಕ್ಲಬ್‌ ಗಳ ಸದಸ್ಯರುಗಳಿಗೆ ನೀಡಲಾಗುತ್ತಿದೆ, ಮೂರು ಹವಾನಿಯಂತ್ರಿತ ಅತಿಥಿಗೃಹಗಳು, ದೊಡ್ಡ ಸಭಾಂಗಣ, ಸಣ್ಣ ಸಭಾಂಗಣಗಳು, ಗ್ರಂಥಾಲಯ, ಜಿಮ್, ಶೆಟಲ್‌ ಕೋರ್ಟ್‌, ಫ್ಯಾಮಿಲಿ ರಸ್ಟೋರಂಟ್‌, ಮೆನ್ಸ್‌ ಬಾರ್‌ (ಕ್ಲಬ್‌ ಸದಸ್ಯರುಗಳಿಗೆ ಮಾತ್ರ) ರೂಫ್‌ ಗಾರ್ಡನ್‌ ಇದೆ.

ಸದಸ್ಯರುಗಳ ನಿಯಮಿತ ಸಹಕಾರ ಕ್ಲಬ್‌ ಮುನ್ನಡೆಗೆ ಸಹಕಾರವಾಗುತ್ತದೆ ಎಂಬ ಧ್ಯೇಯದೊಡನೆ ಎಲ್ಲ ಸದಸ್ಯರುಗಳ ಸಹಕಾರವನ್ನು ಬಯಸುತ್ತೇನೆ.

ಶುಭ ವಂದನೆಗಳೊಂದಿಗೆ

ಬಾಬು ಮೊಯ್ಲಿ ಎಂ ಸಿ

ಗೌ.ಕಾರ್ಯದರ್ಶಿ